ಉಪಗ್ರಹ ವಾಹಕವೆಂದರೆ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡ್ಡಯಣ (ಹೊತ್ತಯ್ಯುವ) ವಾಹಕ ರಾಕೆಟ್ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀನಾ,ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. == ಭಾರತದ ಉಡ್ಡಯಣ ವಾಹಕ ಗಳು == ೧. ಎಸ್.ಎಲ್.ವಿ.(- ) ೨. ಎ.ಎಸ್.ಎಲ್.ವಿ.(- ) ೩. ಪಿ.ಎಸ್.ಎಲ್.ವಿ.(- ) ೪. ಜಿ.ಎಸ್.ಎಲ್.ವಿ.(- ) ೫. ಜಿ.ಎಸ್.ಎಲ್.ವಿ ಮಾರ್ಕ್-೩ (--3) ಈಗ ಎಸ್.ಎಲ್.ವಿ., ಮತ್ತು ಎ.ಎಸ್.ಎಲ್.ವಿ., ಉಡ್ಡಯಣ ವಾಹಕಗಳು ಚಾಲ್ತಿಯಲ್ಲಿಲ್ಲ. ಇಸ್ರೋ ಸಂಸ್ಥೆಯು ಜಿ.ಎಸ್.ಎಲ್.ವಿ.- ಮಾರ್ಕ್-೩ ಉಡ್ಡಯಣ ವಾಹಕವನ್ನು ಇನ್ನೂ ಅಭಿವೃದ್ದಿಪಡಿಸುತ್ತಲಿದೆ. == ಇಂಧನ == ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು /-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ. == ಪ್ರಪಂಚದಲ್ಲಿ ಚಾಲ್ತಿಯಲ್ಲಿರು ಪ್ರಮುಖ ರಾಕೇಟ್ ಗಳು == == ನೋಡಿ == ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ) ಪಿಎಸ್‌ಎಲ್‌ವಿ–ಸಿ38 - ಕಾರ್ಟೊಸ್ಯಾಟ್‌ 2 ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ)ಸಿ-37 ಮಂಗಳಯಾನ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ == ಉಲ್ಲೇಖ ==